Sunil Javali (ಸುನೀಲ ಜವಳಿ)

ನಮಸ್ತೆ ಎಲ್ಲರಿಗೂ..

ನಾನೊಬ್ಬ ಸಿನಿಮಾ ಪ್ರೇಮಿ ಹಾಗೂ ಅಭಿಮಾನಿಯಾಗಿದ್ದು, ಸಿನಿಮಾ, ಪುಸ್ತಕ ಮತ್ತು ವಯಕ್ತಿಕ ವಿಚಾರಕ್ಕೆ ಸಂಭಂದಿಸಿದ ವಿಡಿಯೋಗಳನ್ನು ನೋಡಬಹುದು..

ದಯವಿಟ್ಟು ನನ್ನ ಈ ಯೂಟ್ಯೂಬ್ ಚಾನಲ್ ಅನ್ನು Subscribed ಮಾಡಿಕೊಂಡು support ಮಾಡಿ..

including cinema/ Books / Interviews /Public Opinion/ personal Blogs


Sunil Javali (ಸುನೀಲ ಜವಳಿ)

ಪ್ರೀತಿ... ಬರೀ ಒಂದೇ ದಿನಕ್ಕೆ ಸೀಮಿತವಲ್ಲ... ಅದು ಸದಾ ಕಾಲ ಇರುವಂತದ್ದು..

ಪ್ರೀತಿ.. ಇದೊಂದು ಪುಟ್ಟ ಪದವಾದರೂ ತನ್ನೊಂದಿಗೆ ಬೆಟ್ಟದಷ್ಟು ನೋವು ನಲಿವುಗಳ ಅಲೆಯನ್ನು ಹೊತ್ತು ತರುತ್ತದೆ.. ಪ್ರೀತಿ... ನಂಬಿಕೆಯನ್ನು ಬೆಳೆಸುತ್ತದೆ.. ಗೌರವಿಸುತ್ತದೆ.. ಕಾಪಾಡುತ್ತದೆ..

ಪ್ರೀತಿ ಎಂದರೆ ಅಮೃತಧಾರೆ, ಜೀವನ ವಾಹಿನಿ..

ಪ್ರೀತಿ ಇಲ್ಲದ ಮೇಲೆ
ಹೂ ಅರಳಿತೂ ಹೇಗೆ..
ಮೋಡ ಕಟ್ಟಿತೂ ಹೇಗೆ..???
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ ?

ಪ್ರೀತಿ ಇಲ್ಲದ ಮೇಲೆ-
ಮಾತಿಗೆ ಮಾತು ಕೂಡೀತು ಹೇಗೆ ?
ಅರ್ಥ ಹುಟ್ಟೀತು ಹೇಗೆ?
ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ ?

ಡಾ. ಜಿ.ಎಸ್ ಶಿವರುದ್ರಪ್ಪ ಅವರ ಈ ಕವಿತೆಯ ಸಾಲಿನಂತೆ, ಪ್ರೀತಿ ಇಲ್ಲದ ಹೊರತು ಈ ಜಗದಲಿ ಮತ್ತೆನಿರಲು ಸಾಧ್ಯ... ಅಲ್ಲವೇ....!!!

ಪ್ರೇಮಿಗಳ ದಿನಾಚರಣೆ ಆಚರಿಸುವವರು ಆಚರಿಸಲಿ, ತಪ್ಪೇನಿಲ್ಲಾ.. ಆದರೆ ಪ್ರೇಮ ಎನ್ನುವುದು ನಿತ್ಯ ನಿರಂತರ.. ಸೋ.. ಎಲ್ಲರಿಗೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ..

#lovers #february14 #premigaladina

1 week ago | [YT] | 0

Sunil Javali (ಸುನೀಲ ಜವಳಿ)

ನಮ್ಮೆಲ್ಲರಿಗೂ ಆತ್ಮೀಯರಾಗಿರುವ ಅಫ್ಜಲ್ ಸೂಪರ್ ಸ್ಟಾರ್ ಸರ್ ರವರು ನಟನೆಯೊಂದಿಗೆ ನಿರ್ದೇಶನ ಮಾಡಿರುವ 'ನೆನಪುಗಳ ಮಾತು ಮಧುರ' ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಹಲವಾರು ನಟ, ನಿರ್ಮಾಪಕ, ನಿರ್ದೇಶಕರ ಚಿತ್ರಗಳಿಗೆ ಪ್ರಚಾರ ಮತ್ತು ಪ್ರೋತ್ಸಾಹ ನೀಡುತ್ತ ಎಲ್ಲರಿಗೂ ಒಳ್ಳೆಯದನ್ನು ಬಯಸುವ
ಅಫ್ಜಲ್ ಸರ್ ಅವರಿಗೆ ಮತ್ತು ಇಡೀ ತಂಡದವರಿಗೆ ಶುಭವಾಗಲಿ..

ಇನ್ನು ಈ ಚಿತ್ರದಲ್ಲಿ 'ಒನ್ ಲವ್ ಟೂ ಸ್ಟೋರಿ' ಮತ್ತು '1975' ಚಿತ್ರಗಳ ನಿರ್ದೇಶಕರಾದ ವಸಿಷ್ಠ ಸರ್ ರವರು ಅವರು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು ಸಂಕಲನಕಾರರು, ನಟರು ಮತ್ತು ನಿರ್ದೇಶಕರಾಗಿರುವ ನಾಗೇಂದ್ರ ಅರಸ್ ಸರ್ ರವರು ಮತ್ತು ನಿರ್ಮಾಪಕರಾದ ರೆಡ್ and ವೈಟ್ ಸೆವೆನ್ ರಾಜ್ ಅವರು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ನಾಲ್ಕು ಕಥೆಗಳು ಇರಲಿದ್ದು, ಒಂದು ಕಥೆ ಇಪ್ಪತ್ತೈದು ನಿಮಿಷಗಳ ಅವಧಿ ಇರುತ್ತದೆ. ನಾಲ್ಕು ಕಥೆಗಳು ಬೇರೆಯದೆ ಆಯಾಮದಲ್ಲಿ ಸಾಗುತ್ತವೆ. ನಾವು ಎದುರಿಸುತ್ತಿರುವ ಹಾಗೂ ನೋಡುತ್ತಿರುವ ಕೆಲವು ವಿಷಯಗಳೇ ಈ ಚಿತ್ರದ ಕಥೆಗೆ ಸ್ಫೂರ್ತಿಯಾಗಿದೆ.

ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ, ಶುಭ ತೀರ್ಥ, ವಾದ್ಯಾ, ಅರವಿಂದ್... ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

'ನೆನಪುಗಳ ಮಾತು ಮಧುರ'... ಎನ್ನುವ ಉತ್ತಮ ಶೀರ್ಷಿಕೆಯ ಸಿನಿಮಾ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ.. ಇಡೀ ತಂಡದವರಿಗೆ ಶುಭಾಶಯಗಳು... 🌼🌼💐💐💐

2 weeks ago | [YT] | 0

Sunil Javali (ಸುನೀಲ ಜವಳಿ)

ಮೈಸೂರಿನ ತಾಯಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನಂದಿ ಮತ್ತು ಪದ್ಮಾ ಥಿಯೇಟರ್..

Once again ಮಹಾದೇವ ಪ್ರಸಾದ್ ಅವರೊಂದಿಗೆ..

2 weeks ago | [YT] | 2

Sunil Javali (ಸುನೀಲ ಜವಳಿ)

ರಾಜು ವೈವಿಧ್ಯ ಸರ್ ಅವರನ್ನು ಬಹಳ‌ ದಿನಗಳಿಂದ ಭೇಟಿಯಾಗಬೇಕು ಅಂದುಕೊಂಡಿದ್ದೆ, ಆಗಿರಲಿಲ್ಲ. ಇವತ್ತು unexpected ಆಗಿ ಭೇಟಿಯಾಗುವ ಅವಕಾಶ ಸಿಕ್ತು..

ವಯಕ್ತಿಕ ಬದುಕು, ಸಾಹಿತ್ಯ ಮತ್ತು ಸಿನಿಮಾ ಬಗೆಗಿನ ಆಸಕ್ತಿ... ಹೀಗೆ ಸಿಕ್ಕ ಸ್ವಲ್ಪ ಸಮಯದ ಅವಕಾಶದಲ್ಲಿ ಮಾತನಾಡಿದೆ.. ಬಹಳ ಖುಷಿಯಾಯಿತು..

ಮೂಲತಃ ಮೈಸೂರಿನವರಾದ ರಾಜು ವೈವಿಧ್ಯ ಸರ್ ರವರು ರಂಗಭೂಮಿ ಕಲಾವಿದರಾಗಿದ್ದು, ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾ, ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.

ಬೊಂಬೆಯಾಟ, ವಾರಿ, ಒಂದು ಸಾವಿನ ಸುತ್ತ.. ಎಂಬ ಕಿರು ಚಿತ್ರಗಳು, 'ಕನ್ನಡಕ್ಕೆ ಕೋಟಿ ನಮನ' ಅಂತ ಕನ್ನಡ ರಾಜ್ಯೋತ್ಸವದ ವಿಡಿಯೋ ಆಲ್ಬಮ್ ಮಾಡಿದ್ದು, 'ಒಂದು ಕಥೆ ಹೇಳ್ಲಾ', 'ಸಮ್ಮರ್ ಹಾಲಿಡೇಸ್', 'ಕೆಂಪಾಪುರದ ಕಳ್ಳರು', 'ರತ್ನಮಂಜರಿ', 'ಕೆರೆಭೇಟೆ'.. ಸೇರಿದಂತೆ ಅನೇಕ ಚಿತ್ರಳಲ್ಲಿ ನಟಿಸಿದ್ದಾರೆ.

ಸಿನಿಮಾ ಜೊತೆ ಜೊತೆಗೆ ನಟನೆಯ ತರಬೇತಿ ಹಾಗೂ ತಮ್ಮದೇ ಯೂಟ್ಯೂಬ್ ಚಾನಲ್ ಹಾಗೂ ಡಿಜಿಟಲ್ distribution ಕಾರ್ಯಾರಂಭ ಮಾಡಿದ್ದಾರೆ.

ಸೋ.. ರಾಜು ಸರ್ ರವರ ಎಲ್ಲಾ ಯೋಜನೆಗಳಿಗೆ ಶುಭವಾಗಲಿ.. Once again belated Happy birthday sir..🌼🌼💐💐💐

#rajuvaividya #KannadaActor

3 weeks ago | [YT] | 3

Sunil Javali (ಸುನೀಲ ಜವಳಿ)

ವೆಡ್ಡಿಂಗ್ ಫೋಟೋಗ್ರಾಫರ್ ನೊಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮ ಕಥಾಹಂದರವನ್ನು 'ಫುಲ್ ಮೀಲ್ಸ್' ಚಿತ್ರವು ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.

ಇದೀಗ ಚಿತ್ರವು 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕರಾದ ಎನ್. ವಿನಾಯಕ ಅವರನ್ನು ಮಾತನಾಡಿಸಲಾಯಿತು..

Link : https://youtu.be/ZK_MV339tKQ?si=sjFVn...

ಅವರೊಂದಿಗೆ ಮಾತನಾಡಿದ ಒಂದು ಪುಟ್ಟ ಸಿಹಿಯಾದ ಮಾತುಕಥೆಯ ಸಂದರ್ಶನ ಇದೀಗ ನಿಮ್ಮ ಮುಂದಿದೆ. once again ಇಡೀ ಚಿತ್ರತಂಡದವರಿಗೆ ಶುಭಾಶಯಗಳು.. 🌼🌼💐💐💐

#FullMeals #Fullmealsmovie #NVinayaka #LikhithShetty #kusheeravi #kannadamovies@vinayaka vinu

2 months ago | [YT] | 0

Sunil Javali (ಸುನೀಲ ಜವಳಿ)

ವೆಡ್ಡಿಂಗ್ ಫೋಟೋಗ್ರಾಫರ್ ನೊಬ್ಬ ಪ್ರೀತಿಯ ಬಲೆಗೆ ಬೀಳುವ ತ್ರಿಕೋನ ಪ್ರೇಮ ಕಥಾಹಂದರವನ್ನು ಒಳಗೊಂಡಿದ್ದ 'ಫುಲ್ ಮೀಲ್ಸ್' ಚಿತ್ರವು ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.

ಇದೀಗ ಚಿತ್ರವು 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕರಾದ ಎನ್. ವಿನಾಯಕ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದೆ..

ಒಂದು ಪುಟ್ಟ ಸಿಹಿಯಾದ ಮಾತುಕಥೆಯ ಸಂದರ್ಶನವನ್ನು ಮಾಡಿದ್ದೇನೆ. ಸಧ್ಯದಲ್ಲಿಯೇ ಆ ಸಂದರ್ಶನ ಬರಲಿದೆ.. once again ಇಡೀ ಚಿತ್ರತಂಡದವರಿಗೆ ಶುಭಾಶಯಗಳು.. 🌼🌼💐💐💐

#FullMeals #FullMealsKannadaMovie #LikhithShetty #KusheeRavi #FullMealsTrailer #WahEnoHavaa #NVinayaka #DGKAudio #KannadaCinema #KannadaMovies #Interview #KannadaDirector #FullMealson21stNovember #DiaKusheeRavi #SandalwoodMovies #SweetMaatukathe #suniljavali N Vinayaka

2 months ago (edited) | [YT] | 1

Sunil Javali (ಸುನೀಲ ಜವಳಿ)

ಮೋಹಕ ತಾರೆ ರಮ್ಯಾ..

ವಯಕ್ತಿಕವಾಗಿ, ನಟಿ ಪ್ರೇಮಾ ಅವರ ಬಳಿಕ ಬಹಳಷ್ಟು ಇಷ್ಟವಾದವರು ನಟಿ ಎಂದರೆ ಅದು ನಮ್ಮ ಮೋಹಕ ತಾರೆ ರಮ್ಯಾ.

ದಿವ್ಯಾ ಸ್ಪಂದನ ಆಗಿದ್ದ, ರಮ್ಯಾ ರವರು ಅಭಿನಯಿಸಿದ ಮೊದಲ ಚಿತ್ರದಿಂದಲೇ ಇಷ್ಟವಾದವರು.

ಅಭಿ ಚಿತ್ರದ ಮುಸ್ಲಿಂ ಪಾತ್ರವಾಗಿರಲಿ, 'ಕಂಠಿ' ಚಿತ್ರದ ರೀಮಾ ಪಾತ್ರವಾಗಿರಲಿ, 'ಅಮೃತಧಾರೆ'ಯ ಅಮೃತಾ, 'ಸೇವಂತಿ ಸೇವಂತಿ' ಚಿತ್ರದ ಸೇವಂತಿ, 'ಗೌರಮ್ಮ' ಚಿತ್ರದ ಗೌರಮ್ಮ, 'ಸಂಜು ವೆಡ್ಸ್ ಗೀತಾ' ಚಿತ್ರದ ಗೀತಾ,,,

ಹೀಗೆ, ಅನೇಕ ಚಿತ್ರಗಳ ಪಾತ್ರಗಳು ಬಹಳ ಇಷ್ಟವಾಗಿದ್ದವು ಮತ್ತು ಕಾಡಿದ್ದವು ಸಹ.

ಅಭಿನಯದ ಮೂಲಕ ಮೋಹಕ ತಾರೆ ಎಂಬ ಬಿರುದು ಪಡೆದ ರಮ್ಯಾ ರವರು, ಬಣ್ಣದ ಜಗತ್ತನ್ನು ಬಿಟ್ಟು, ರಾಜಕೀಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ಸರು.

ಬಹಳ ವರ್ಷಗಳ ನಂತರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'.. ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುವ ಮುನ್ಸೂಚನೆ ನೀಡಿದ್ದು ಬಹಳಷ್ಟು ಖುಷಿ ಕೊಟ್ಟಿತ್ತು.

ಸಧ್ಯ ಇವರು ನಟಿಸಿದ್ದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರವು 'ರಕ್ತ ಕಾಶ್ಮೀರ' ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಆಗಲಿದೆ. ಹೀಗಾಗಿ ಮತ್ತೊಮ್ಮೆ ಅಂದಿನ ರಮ್ಯಾರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು..

In fact.. ರಮ್ಯಾ ರವರು, ಕನ್ನಡ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ ಸಹ ಕನ್ನಡ ಭಾಷೆಯ ಬಗ್ಗೆ ತಿರಸ್ಕಾರ ಭಾವನೆ ಹೊಂದಿಲ್ಲಾ ಎಂಬುದು ಹೆಮ್ಮೆಯ ವಿಚಾರ.

ರಮ್ಯಾ ರವರ, ಅಭಿನಯ, ನಗು, ಮುಗ್ದತೆ, ಕೋಪ ಮತ್ತು ಗಾಂಚಲಿ.. ಹೀಗೆ ಎಲ್ಲದಕ್ಕೂ ಚಂದ ಅನಿಸ್ತಾರೆ. ಇವರು ಪುನಃ ಚಿತ್ರರಂಗಕ್ಕೆ ಮರಳಿ ಬೇಕು ಎನ್ನುವ ಅನೇಕ ಅಭಿಮಾನಿಗಳ ಸಾಲಿನಲ್ಲಿ ನಾನೂ ಸಹ ಒಬ್ಬ..

ಹೀಗೆ, ಅದೆಷ್ಟೋ ವರ್ಷಗಳ ಕಾಲ ಚಂದನವನದಲ್ಲಿ ಮಿಂಚಿದ ಸ್ಯಾಂಡಲ್ವುಡ್ ಕ್ವೀನ್, ಈಗಲೂ ಅಸಂಖ್ಯ ಅಭಿಮಾನಿಗಳ ಮನದರಸಿಯಾಗಿರುವ ಮೋಹಕ ತಾರೆ, ನಮ್ಮೆಲ್ಲರ ನೆಚ್ಚಿನ ರಮ್ಯಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು😊💐🎂 Divya Spandana/Ramya

#Happybirthday #Ramya #happybirthdayramya #DivyaSpandanaBirthday

2 months ago | [YT] | 0

Sunil Javali (ಸುನೀಲ ಜವಳಿ)

Link : https://youtu.be/JzNT2CYZmpE?si=EiUIa...


ನಾಗಮುಖ ಅವರ ನಿರ್ದೇಶನದ 'ಧರ್ಮಂ'... ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಡಿಸೆಂಬರ್ 05 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ..

#Dharmam #NagamukhaAkkiAlur #ShashiKumar #BheeshmaRamaiha #vairanikashetty #DharmamTrailor #Nagamukha #AshokHedge #KannadaMovie

2 months ago (edited) | [YT] | 0

Sunil Javali (ಸುನೀಲ ಜವಳಿ)

ನಾಗಮುಖ ಅವರ ನಿರ್ದೇಶನದ 'ಧರ್ಮಂ'... ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ಡಿಸೆಂಬರ್ 05 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ..

#Dharmam #NagamukhaAkkiAlur #ShashiKumar #BheeshmaRamaiha #vairanikashetty #DharmamTrailor #Nagamukha #AshokHedge #KannadaMovie



https://youtu.be/JzNT2CYZmpE?si=J2y37...

2 months ago (edited) | [YT] | 0