Raghavendra Chitravani

Raghavendrachitravani .🎥(Entertainment youtube channel )

This is an official channel of Raghavendra chitravani is the Entertainment youtube channel
Watch latest movie updates
.
.
DV Sudheendra founder of Sri Raghavendra Chitravani. As an independent film public relations officer recognition for his services.
DG Venkatesh popular as Sudheendra Venkatesh carried out his task in the Cinema Publicity field for over 2000 films since 2006! continuing by sudheendra venkatesh

For latest update of Kannada film industry please subscribe my channel and click on the Bell Icon🔔

Thank You


Raghavendra Chitravani

*'ನಾಗಬಂಧಂ' ಟೀಸರ್ ಬಿಡುಗಡೆ ಮಾಡಿದ ಸೂಪರ್‌ಸ್ಟಾರ್ ಮಹೇಶ್ ಬಾಬು; ಪೌರಾಣಿಕ ಸಾಹಸಗಾಥೆಯ ದೃಶ್ಯ ವೈಭವ!*

ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ 'ನಾಗಬಂಧಂ' ಚಿತ್ರದ ಭವ್ಯ ಟೀಸರ್ ಅನ್ನು ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರು ಅನಾವರಣಗೊಳಿಸಿದ್ದಾರೆ. ಮಹಾ ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಟೀಸರ್, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪ್ರೇಕ್ಷಕರನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ಯುವ ಭರವಸೆ ನೀಡಿದೆ.

ನಿರ್ದೇಶಕ ಅಭಿಷೇಕ್ ನಾಮಾ ಅವರ ಮಹತ್ವಾಕಾಂಕ್ಷೆಯ ಈ ಚಿತ್ರವನ್ನು ನಿರ್ಮಾಪಕರುಗಳಾದ ಕಿಶೋರ್ ಅನ್ನಪುರೆಡ್ಡಿ ಮತ್ತು ನಿಶಿತಾ ನಾಗಿರೆಡ್ಡಿ ದೊಡ್ಡ ಮಟ್ಟದಲ್ಲಿ ನಿರ್ಮಿಸಿದ್ದಾರೆ. ವಿಶ್ವದರ್ಜೆಯ ತಾಂತ್ರಿಕ ಮೌಲ್ಯಗಳು ಮತ್ತು ಅದ್ಧೂರಿ ನಿರ್ಮಾಣದೊಂದಿಗೆ 'ನಾಗಬಂಧಂ' ಮೂಡಿಬಂದಿದೆ. ಆಧ್ಯಾತ್ಮಿಕ ಆಳ ಮತ್ತು ದೃಶ್ಯ ವೈಭವದ ಸಂಗಮವಾಗಿ ಪ್ರತಿ ಫ್ರೇಮ್ ಕೂಡ ಪ್ರೇಕ್ಷಕರ ಕಣ್ಮನ ಸೆಳೆಯುತ್ತಿದೆ.

*ಹಿಮಾಲಯದ ನಿಗೂಢ ಲೋಕ*

ಹಿಮಾಲಯದ ಹಿಮಚ್ಛಾದಿತ ಪರ್ವತಗಳ ಹಿನ್ನೆಲೆಯಲ್ಲಿ ಟೀಸರ್ ಆರಂಭವಾಗುತ್ತದೆ. ಕಾಲಕ್ಕಿಂತಲೂ ಹಳೆಯದಾದ ಮತ್ತು ಗುಪ್ತವಾಗಿರುವ ರಹಸ್ಯವೊಂದರ ಕಾವಲುಗಾರನಾಗಿ ಕಥೆ ಸಾಗುತ್ತದೆ. ಅಬ್ದಾಲಿ ನೇತೃತ್ವದ ಐತಿಹಾಸಿಕ ಅಫ್ಘಾನ್ ಆಕ್ರಮಣದಿಂದ ಪ್ರೇರಿತವಾದ ಈ ಕಥೆಯು ಪುರಾಣ, ಇತಿಹಾಸ ಮತ್ತು ಆಧ್ಯಾತ್ಮಿಕ ಯುದ್ಧವನ್ನು ಸಮರ್ಥವಾಗಿ ಮಿಳಿತಗೊಳಿಸಿದೆ.

ಕಥೆಯ ಕೇಂದ್ರಬಿಂದು 'ನಾಗಬಂಧಂ ದೇವಾಲಯ'. ದೈವಿಕ ಶಕ್ತಿಗಳಿಂದ ರಕ್ಷಿಸಲ್ಪಟ್ಟಿರುವ ಈ ಗುಪ್ತ ದೇವಾಲಯವು ಬ್ರಹ್ಮಾಂಡದ ಪ್ರಚಂಡ ಶಕ್ತಿಯನ್ನು ತನ್ನ ಒಡಲಲ್ಲಿಟ್ಟುಕೊಂಡಿದೆ. ಈ ಶಕ್ತಿಯು ತಪ್ಪು ಕೈ ಸೇರಿದರೆ ಸಂಭವಿಸಬಹುದಾದ ವಿನಾಶವನ್ನು ತಡೆಯಲು ವಿಧಿಯು ಒಬ್ಬ ಯೋಧನನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದು ಚಿತ್ರದ ಸಾರಾಂಶ.

*ಬ್ರಹ್ಮನ ಸೃಷ್ಟಿ, ವಿಷ್ಣುವಿನ ಧರ್ಮ, ಮಹಾದೇವನ ಕ್ರೋಧ*

ಟೀಸರ್‌ನಲ್ಲಿ ಬರುವ ಈ ಸಾಲುಗಳು ಚಿತ್ರದ ಆತ್ಮವನ್ನು ಬಿಂಬಿಸುತ್ತವೆ. ಭಕ್ತಿ ಮತ್ತು ಯುದ್ಧ, ಧರ್ಮ ಮತ್ತು ವಿನಾಶದ ನಡುವಿನ ಹೋರಾಟವನ್ನು ಇದು ಧ್ವನಿಸುತ್ತದೆ. ನಿರ್ದೇಶಕ ಅಭಿಷೇಕ್ ನಾಮಾ ಅವರು ಕೇವಲ ದೃಶ್ಯಗಳ ಮೂಲಕವೇ ಕಥೆಯನ್ನು ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲದಿದ್ದರೂ, ಟೀಸರ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಚಿತ್ರದ ನಾಯಕ ವಿರಾಟ್ ಕರ್ಣ ಅವರು ಈ ಪಾತ್ರಕ್ಕಾಗಿ ಮಾಡಿಕೊಂಡಿರುವ ಶಾರೀರಿಕ ಬದಲಾವಣೆ ಬೆರಗುಗೊಳಿಸುವಂತಿದೆ. ವಿಶೇಷವಾಗಿ ಮೊಸಳೆಯ ಜೊತೆಗಿನ ಹೋರಾಟ ಮತ್ತು ಭಗವಾನ್ ಶಿವನ ಅವತಾರದಲ್ಲಿ ಅವರ ಪ್ರದರ್ಶನ ಟೀಸರ್‌ನ ಹೈಲೈಟ್. ಶಿವನ ತೀವ್ರತೆ ಮತ್ತು ಭಾವನಾತ್ಮಕ ಆಳವನ್ನು ಅವರು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ.

*ತಾರಾಗಣ ಮತ್ತು ತಾಂತ್ರಿಕ ಶ್ರೀಮಂತಿಕೆ*

ಸೌಂದರ್ ರಾಜನ್ ಎಸ್ ಅವರ ಸಿನಿಮಾಟೋಗ್ರಫಿ ಪ್ರತಿಯೊಂದು ದೃಶ್ಯವನ್ನು ಜೀವಂತವಾಗಿಸಿದೆ. ಜುನೈದ್ ಕುಮಾರ್ ಅವರ ಹಿನ್ನೆಲೆ ಸಂಗೀತವು ರೋಮಾಂಚನವನ್ನುಂಟು ಮಾಡುತ್ತದೆ. ಅಶೋಕ್ ಕುಮಾರ್ ಅವರ ಕಲಾ ನಿರ್ದೇಶನ ಮತ್ತು ಅತ್ಯುನ್ನತ ಮಟ್ಟದ ವಿಎಫ್‌ಎಕ್ಸ್ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿವೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಅಭಿಷೇಕ್ ನಾಮಾ ಅವರದ್ದು. ಅಬೆ ಮತ್ತು ಜುನೈದ್ ಕುಮಾರ್ ಅವರ ಸಂಗೀತ, ಆರ್‌ಸಿ ಪ್ರಣವ್ ಅವರ ಸಂಕಲನ ಚಿತ್ರಕ್ಕಿದೆ.

ನಭಾ ನಟೇಶ್ ಮತ್ತು ಐಶ್ವರ್ಯ ಮೆನನ್ ನಾಯಕಿಯರಾಗಿ ಮಿಂಚಿದ್ದರೆ, ಮಹೇಶ್ ಮಂಜ್ರೇಕರ್, ಜಗಪತಿ ಬಾಬು, ರಿಷಬ್ ಸಾಹ್ನಿ, ಗರುಡ ರಾಮ್, ಮುರಳಿ ಶರ್ಮ ಮತ್ತು ಅನಸೂಯ ಭಾರದ್ವಾಜ್ ಅವರಂತಹ ಅನುಭವಿ ಕಲಾವಿದರು ಈ ಚಿತ್ರಕ್ಕೆ ಬಲ ತುಂಬಿದ್ದಾರೆ. ಈ ಬೇಸಿಗೆಯಲ್ಲಿ 'ನಾಗಬಂಧಂ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.

10 hours ago | [YT] | 37

Raghavendra Chitravani

Happy birthday #RChandru sir

1 week ago | [YT] | 117

Raghavendra Chitravani

Official trailer tomorrow

1 week ago | [YT] | 111

Raghavendra Chitravani

*ನಟಿ ಸೋನಾಲ್ ಮೊಂತೆರೊ ಅವರಿಂದ ನವೀನ್ ಸಜ್ಜು ಅಭಿನಯದ "ಲೋ ನವೀನ" ಚಿತ್ರದ ಎರಡನೇ ಹಾಡಿನ ಅನಾವರಣ* .

ಗಾಯಕನಾಗಿ ಜನಪ್ರಿಯರಾಗಿರುವ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಚಿತ್ರ "ಲೋ ನವೀನ". ಈಗಾಗಲೇ ಈ ಚಿತ್ರದ ಜನಪದ ಶೈಲಿಯ "ಕೋಣಾಣೆ" ಹಾಡು ಬಿಡುಗಡೆಯಾಗಿ ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ "ಲೋ ನವೀನ" ಚಿತ್ರದ "ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ" ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಟಿ ಸೋನಾಲ್ ಮೊಂತೆರೊ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಸಂಸದ ಪುಟ್ಟರಾಜು, ರಾಮಮೂರ್ತಿ, ಮಾದೇಶ್ ಮುಂತಾದ ಗಣ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮೂಲತಃ ಮಳವಳ್ಳಿಯವನು. ಹಳ್ಳಿ ಪರಿಸರದಲ್ಲೇ ಬೆಳೆದವನು. ಗಾಯಕನಾಗಿದ್ದ ನಾನು ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ. ಇದಕ್ಕೆ ಕಾರಣರಾದವರು ನಮ್ಮ ಚಿತ್ರದ ನಿರ್ಮಾಪಕರಾದ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ. ನಾನು ಕಾರ್ಯಕ್ರಮದ ನಿಮಿತ್ತ ಅಮೇರಿಕಾಗೆ ಹೋದಾಗ ಅವರನ್ನು ಮಾದೇಶ್ ಅವರು ಭೇಟಿ ಮಾಡಿಸಿದರು. ಗ್ರಾಮೀಣಾ ಸೊಗಡಿನ ಕಥೆ ಕೇಳಿ ಇಷ್ಟಪಟ್ಟ ಬೆನ್ ಚಿಕ್ಕಸ್ವಾಮಿ ಹಾಗೂ ಕೀರ್ತಿಸ್ವಾಮಿ ನಿರ್ಮಾಣಕ್ಕೆ ಮುಂದಾದರು. ಅವರಿಗೆ ನನ್ನ ಅನಂತ ಧನ್ಯವಾದ. ಇನ್ನೂ, ಈ ಚಿತ್ರಕ್ಕ ನಾನೇ ಸಂಗೀತ ನೀಡಿದ್ದೇನೆ. ಈಗಾಗಲೇ ಚಿತ್ರದ ಮೊದಲ ಹಾಡು "ಕೋಣಾಣೆ" ನಿರೀಕ್ಷೆಗೂ ಮೀರಿ ಜನಪ್ರಿಯವಾಗಿದೆ. ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಈಗ ಚಿತ್ರದ ಎರಡನೇ ಹಾಡು "ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ" ಅನಾವರಣವಾಗಿದೆ. ಇದು ನಾಯಕಿಯನ್ನು ಪರಿಚಯಿಸುವ ಗೀತೆ ಕೂಡ. ಈ ಹಾಡನ್ನು ಜನಪ್ರಿಯ ನಾಯಕಿ ಸೋನಾಲ್ ಅವರು ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ಅಂದಾನಿ ಅವರು ಹಾಡನ್ನು ಬರೆದಿದ್ದಾರೆ. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭಕ್ಕೆ ಆಗಮಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಉಳಿದ ಹಾಡುಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದರು ಚಿತ್ರದ ನಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು.

ನಾನು ಮಳವಳ್ಳಿಯವನು. ಚಿಕ್ಕವಯಸ್ಸಿನಲ್ಲೇ ಗ್ರಾಮೀಣ ಜನಪದ ಹಾಡುಗಳನ್ನು ಕೇಳುತ್ತಾ ಬೆಳೆದವನು ಎಂದು ಮಾತನಾಡಿದ ನಿರ್ಮಾಪಕ ಬೆನ್ ಚಿಕ್ಕಸ್ವಾಮಿ, ನಲವತ್ತು ವರ್ಷಗಳಿಂದ ಅಮೇರಿಕಾದಲ್ಲಿದ್ದರೂ ಕನ್ನಡವನ್ನೇ ಮಾತನಾಡುತ್ತೇನೆ. ದಿನ ಮುದ್ದೆ , ಉಪ್ಸಾರು ತಿನ್ನುತ್ತೇನೆ. ನವೀನ್ ಸಜ್ಜು ಹೇಳಿದ ಗ್ರಾಮೀಣ ಸೊಗಡಿನ ಕಥೆ ಇಷ್ಚವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು ಎಂದರು.

ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಕನಸು. ಆ ಕನಸು ಈಗ ನನಸಾಗಿದೆ. ಅವಕಾಶ ನೀಡಿದ ನವೀನ್ ಸಜ್ಜು ಅವರಿಗೆ, ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ವರ್ಷ.

ಇದು ನನ್ನ ಮೊದಲ ನಿರ್ದೇಶನದ ಚಿತ್ರ‌. "ಲೋ ನವೀನ" ಚಿತ್ರ ಉತ್ತಮವಾಗಿ ಮೂಡಿಬರಲು ಚಿತ್ರತಂಡದ ಸಹಕಾರ ಅಪಾರ ಎಂದು ನಿರ್ದೇಶಕ ಧನುರ್ಧಾರಿ ಪವನ್ ತಿಳಿಸಿದರು.

ಛಾಯಾಗ್ರಾಹಕ ರಿಷಿಕೇಶ್, ನೃತ್ಯ ನಿರ್ದೇಶಕ ವಿನಾಯಕ್ ಆಚಾರ್ಯ, ಗೀತರಚನೆಕಾರ ಅಂದಾನಿ ಮುಂತಾದ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

2 weeks ago | [YT] | 210

Raghavendra Chitravani

*ಕನ್ನಡದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ* .

*ಸುವರ್ಣ ಸಂಭ್ರಮದ ಲೋಗೊ ಅನಾವರಣ ಮಾಡಿ ಹಾರೈಸಿದ ಸಿನಿರಂಗದ ಗಣ್ಯರು*

ಕನ್ನಡದ ಮೊದಲ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಈಗ 50ರ ಸಡಗರ. 1976 ರಲ್ಲಿ ದಿ.ಡಿ.ವಿ.ಸುಧೀಂದ್ರ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಪ್ರಾರಂಭಿಸಿದರು. ಈವರೆಗೂ ಸುಮಾರು 3000ಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರ ಕಾರ್ಯ ನೀಡಿರುವ ಏಕ ಮಾತ್ರ ಸಂಸ್ಥೆ ಇದಾಗಿದೆ. ಈವರೆಗೂ ಭಾರತ ಚಿತ್ರರಂಗದ ಇತಿಹಾಸದಲ್ಲೇ ಯಾವ ಪ್ರಚಾರ ಸಂಸ್ಥೆ(ಪಿ.ಆರ್.ಓ) ಕೂಡ ಐವತ್ತು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಉದಾಹರಣೆ ಇಲ್ಲ. ಪ್ರಸ್ತುತ ಈ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್ ಮುನ್ನಡೆಸುತ್ತಿದ್ದಾರೆ. ಸುಧೀಂದ್ರ ಅವರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವಾಸುದೇವ್,‌ ಪವನ್ ವೆಂಕಟೇಶ್ ಸಾಥ್ ನೀಡುತ್ತಿದ್ದಾರೆ. ಐವತ್ತರ ಸಂಭ್ರಮವನ್ನು ಏಪ್ರಿಲ್ ತಿಂಗಳಲ್ಲಿ ವಿಶೇಷವಾಗಿ ಆಚರಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುಂದಾಗಿದೆ. ಇದರ ಪೂರ್ವಭಾವಿಯಾಗಿ ಸುವರ್ಣ ಸಂಭ್ರಮದ ಲೋಗೊ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಹಿರಿಯ ನಟರಾದ ಜೆ.ಕೆ.ಶ್ರೀನಿವಾಸಮೂರ್ತಿ, ನಟ ಕೋಮಲ್ ಕುಮಾರ್ ಹಾಗೂ ನಟಿ ಅನು ಪ್ರಭಾಕರ್ ಮುಖರ್ಜಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುವರ್ಣ ಸಂಭ್ರಮದ ಲೋಗೊ ಅನಾವರಣ ಮಾಡಿದರು. ಡಿ.ವಿ.ಸುಧೀಂದ್ರ ಅವರ ಪತ್ನಿ ಶ್ರೀಮತಿ ಪದ್ಮ ಸುಧೀಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಗಣ್ಯರು ಕನ್ನಡದ ಮೊದಲ ಪಿ.ಆರ್.ಓ ಸುಧೀಂದ್ರ ಅವರ ಬಗ್ಗೆ ಹಾಗೂ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಕುರಿತು ಮಾತನಾಡಿದರು.

ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೂ 50 ವರ್ಷ. ನಾನು ಸಿನಿಮಾರಂಗಕ್ಕೆ ಬಂದು 50 ವರ್ಷ ಎಂದು ಮಾತನಾಡಿದ ಹಿರಿಯ ನಟ ಜೆ.ಕೆ ಶ್ರೀನಿವಾಸಮೂರ್ತಿ, ಆಗಿನಿಂದಲೂ ನನಗೆ ಸುಧೀಂದ್ರ ಅವರ ಜೊತೆ ಒಡನಾಟ. ಪ್ರಚಾರ ಸಂಸ್ಥೆಯೊಂದು ಈ ರೀತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಖುಷಿಯಾಗಿದೆ. ರಾಘವೇಂದ್ರ ಚಿತ್ರವಾಣಿ ನೂರು ವರ್ಷಗಳ ಸಂಭ್ರಮವನ್ನು ಕಾಣುವಂತಾಗಲಿ ಎಂದು ಹಾರೈಸಿದರು.

"ನೀವು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟರಾಗಿ ಬೆಳೆಯುತ್ತೀರಾ" ಎಂದು ನನಗೆ ಹಾರೈಸಿದವರು ಸುಧೀಂದ್ರ ಅವರು. ಸುಧೀಂದ್ರ ಅವರ ತುಂಬು ಕುಟುಂಬ ನೋಡಿದರೆ ನನಗೆ ಸಂತೋಷ ಆಗುತ್ತದೆ. ಸುಧೀಂದ್ರ ಅವರ ನಿಧನದ ನಂತರ ವೆಂಕಟೇಶ್ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಕುಟುಂಬದ ಎಲ್ಲರೂ ಅವರಿಗೆ ಜೊತೆಯಾಗಿ ನಿಂತಿದ್ದಾರೆ. ರಾಘವೇಂದ್ರ ಚಿತ್ರವಾಣಿ ಸಂಸ್ಥೆ ರಾಯರ ದಯೆಯಿಂದ ಇನ್ನಷ್ಟು ಹೆಸರು ಮಾಡಲಿ ಎಂದು ನಟ ಕೋಮಲ್ ಕುಮಾರ್ ಹಾರೈಸಿದರು.

ನಾನು ಬಾಲ ನಟಿಯಾದಗಿನಿಂದಲೂ ಸುಧೀಂದ್ರ ಸರ್ ಅವರನ್ನು ನೋಡಿಕೊಂಡು ಬೆಳೆದವಳು. ನಮ್ಮ ಕುಟುಂಬಕ್ಕೂ ಹಾಗೂ ಅವರ ಕುಟುಂಬಕ್ಕೂ ಬಹಳ ಆತ್ಮೀಯತೆ. ಎಲ್ಲರೂ ಹೇಳಿದ ಹಾಗೆ ಪ್ರಚಾರ ಸಂಸ್ಥೆಯೊಂದು 50 ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ನಟಿ ಅನು ಪ್ರಭಾಕರ್ ಮುಖರ್ಜಿ ಹೇಳಿದರು.

ರಾಘವೇಂದ್ರ ಚಿತ್ರವಾಣಿ ಸಾಗಿ ಬಂದ ಬಗ್ಗೆ ಮಾತನಾಡಿದ ಸಂಸ್ಥೆಯ ರುವಾರಿ ಸುಧೀಂದ್ರ ವೆಂಕಟೇಶ್, ಲೋಗೊ ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ತಿಳಿಸಿದರು. ಏಪ್ರಿಲ್ ನಲ್ಲಿ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 50 ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಸಿದ್ದತೆ ನಡೆಯುತ್ತಿದೆ. ಆಗಿನಿಂದಲೂ ನಮಗೆ ಪ್ರೋತ್ಸಾಹ ನೀಡುತಾ ಬಂದಿರುವ ಚಿತ್ರರಂಗ ಹಾಗೂ ಮಾಧ್ಯಮರಂಗಕ್ಕೆ ನಾವು ಆಬಾರಿ ಎಂದರು. ಡಿ.ವಿ.ಸುಧೀಂದ್ರ ಅವರ ಪುತ್ರ ಸುನೀಲ್ ಸುಧೀಂದ್ರ, ಡಿ.ಜಿ.ವೆಂಕಟೇಶ್ , ಪವನ್ ವೆಂಕಟೇಶ್ ಹಾಗೂ ಸುಧೀಂದ್ರ ಅವರ ಕುಟುಂಬದ ಸದಸ್ಯರು ಸಮಾರಂದಲ್ಲಿ ಉಪಸ್ಥಿತರಿದ್ದರು.
#raghavendrachitravani50years #sudheendravenkateshpro

2 weeks ago | [YT] | 116

Raghavendra Chitravani

Kannada

Some journeys are measured not in miles, but with gratitude 💓

#Payaname Full Lyrical Song Out Now

🌍 #SeethaPayanam WORLDWIDE RELEASE | FEB 14, 2026
Telugu | Kannada | Tamil | Malayalam | Hindi

@arjunsarjaa @aishwaryaarjun @niranjansudhindra @dhruva_sarjaa @anuprubensmusic @joinprakashraj #Sathyaraj @saimadhav_burra @sreeraamfilmsofficial @saregama_kannada @pro_sudheendravenkatesh @pro_pavanvenkatesh
@raghavendrachitravani #SeethaPayanamOnFeb14

2 weeks ago | [YT] | 67

Raghavendra Chitravani

Bank of Bhagyalakshmi

3 weeks ago | [YT] | 79

Raghavendra Chitravani

*ಗ್ರಾಮಗ್ರಾಮಗಳಲ್ಲೂ ಸದ್ದು ಮಾಡುತ್ತಿದೆ "ಗ್ರಾಮಾಯಣ" ಚಿತ್ರದ " ಬೆಂಕಿ ಹಾಡು* .

*ವಿನಯ್ ರಾಜ್ ಕುಮಾರ್ ಅಭಿನಯದ ಈ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಹಾರೈಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್* .

ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ - ಮೇಘ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ "ಗ್ರಾಮಾಯಣ" ಚಿತ್ರದ "ಬೆಂಕಿ" ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದರು. ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲೆಂದು ಶಿವಣ್ಣ ಹಾರೈಸಿದರು. ಗೀತಾ ಶಿವರಾಜಕುಮಾರ್ ಅವರು ಉಪಸ್ಥಿತರಿದ್ದರು. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಈ ಹಾಡನ್ನು ಕಪಿಲ ಕಪಿಲನ್ ಹಾಗೂ ಐರಾ ಉಡುಪಿ ಹಾಡಿದ್ದಾರೆ. ಇದು ಶಿವರಾಜಕುಮಾರ್ ಅಭಿನಯಿಸಿದ್ದ "ಮನ ಮೆಚ್ಚಿದ ಹುಡುಗಿ" ಚಿತ್ರದ "ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೇನು" ಹಾಡಿನ ರೀಮಿಕ್ಸ್ ಆಗಿದೆ. ಉಪೇಂದ್ರ ಕುಮಾರ್ ಸಂಗೀತ ಸಂಯೋಜಿಸಿದ್ದ ಈ ಹಾಡನ್ನು ಚಿ.ಉದಯಶಂಕರ್ ಬರೆದಿದ್ದರು. ಎಸ್.ಪಿ.ಬಿ ಹಾಗೂ ಎಸ್ ಜಾನಕಿ ಹಾಡಿದ್ದರು. ಈಗ ಇದೇ ಹಾಡನ್ನು "ಗ್ರಾಮಾಯಣ" ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಹಾಡಿನ ಅನಾವರಣದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರ್ ನಾಯ್ಡು ಅವರ ಉಪಸ್ಥಿತಿಯಲ್ಲಿ ಮಾತನಾಡಿದ ನಿರ್ಮಾಪಕ ಲಹರಿ ವೇಲು, "ಗ್ರಾಮಾಯಣ" ನಮ್ಮ ಲಹರಿ ಸಂಸ್ಥೆ ನಿರ್ಮಾಣದ ಒಂಭತ್ತನೇ ಚಿತ್ರ. ದೇವನೂರು ಚಂದ್ರು ಒಂದೊಳ್ಳೆ ಗ್ರಾಮೀಣ ಸೊಗಡಿನ‌ ಚಿತ್ರ ಮಾಡಿಕೊಂಡಿದ್ದಾರೆ. ವಿನಯ್ ರಾಜಕುಮಾರ್, ಮೇಘ ಶೆಟ್ಟಿ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. "ಮನ ಮೆಚ್ಚಿದ ಹುಡುಗಿ" ಚಿತ್ರದ ಮೂಲ ಹಾಡು ನಮ್ಮ ಲಹರಿ ಸಂಸ್ಥೆಯಿಂದ ಬಿಡುಗಡೆಯಾಗಿತ್ತು. ಈಗ ರೀಮಿಕ್ಸ್ ಹಾಡು ಕೂಡ ನಮ್ಮ ಸಂಸ್ಥೆಯಿಂದಲೇ ಬಿಡುಗಡೆಯಾಗುತ್ತಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು.

ಕಾರಣಾಂತರದಿಂದ ನಿಂತು‌ ಹೋಗಿದ್ದ "ಗ್ರಾಮಾಯಣ" ವನ್ನು ನಿರ್ಮಾಣ ಮಾಡಿ ಫೆಬ್ರವರಿಯಲ್ಲಿ ಅದ್ದೂರಿ ಬಿಡುಗಡೆ ಮಾಡಲು ಮುಂದಾಗಿರುವ ನಿರ್ಮಾಣ ಸಂಸ್ಥೆಯಾದ ಲಹರಿ ಫಿಲಂಸ್ ಗೆ ಅನಂತ ಧನ್ಯವಾದ. ಕೆ.ಪಿ.ಶ್ರೀಕಾಂತ್ ಅವರಿಗೂ ಆಬಾರಿ. ಇನ್ನೂ ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಈವರೆಗೂ ನೀವು ನೋಡಿರದ ವಿನಯ್ ರಾಜಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಮೇಘಶೆಟ್ಟಿ, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ, ಸೀತಾ ಕೋಟೆ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರಂತೂ ನಿಗದಿತ ಸಮಯಕ್ಕೂ ಮುಂಚೆಯೇ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರಂತೂ ಇಂದು ಬಿಡುಗಡೆಯಾಗಿರುವ "ಬೆಂಕಿ" ಹಾಡು ಸೇರಿದಂತೆ ಸುಮಧುರ ಹಾಡುಗಳನ್ನು ನೀಡಿದ್ದಾರೆ. ಒಟ್ಟಾರೆ ಇಡೀ ತಂಡದ ಶ್ರಮದಿಂದ "ಗ್ರಾಮಾಯಣ" ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ದೇವನೂರು ಚಂದ್ರು.

ಲಹರಿ ಸಂಸ್ಥೆಯ 50ನೇ ವರ್ಷದ ಸಂದರ್ಭದಲ್ಲಿ "ಗ್ರಾಮಾಯಣ" ಚಿತ್ರ ಬರುತ್ತಿರುವುದು ತುಂಬಾ ಸಂತೋಷವಾಗಿದೆ. ಎಲ್ಲರೂ ನನ್ನ ನಟನೆ ಚೆನ್ನಾಗಿದೆ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕರು. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಸಿನಿಮಾದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳೇ 'ಗ್ರಾಮಾಯಣ" ಏನೆಂದು ಹೇಳಲಿದೆ. ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಸಿಕ್ತ್ ಸೆನ್ಸ್ ಸೀನ ನನ್ನ ಪಾತ್ರದ ಹೆಸರು. ಇನ್ನೂ, ಇಂದು ಬಿಡುಗಡೆಯಾದ "ಬೆಂಕಿ" ಹಾಡನ್ನು ಬಿಡುಗಡೆ ಮಾಡಿಕೊಟ್ಟ ನಾನು ಹೆಚ್ಚಾಗಿ ಪ್ರೀತಿಸುವ ಹಾಗೂ ಗೌರವಿಸುವ ದೊಡ್ಡಪ್ಪ, ದೊಡ್ಡಮ್ಮ ಅವರಿಗೆ ಧನ್ಯವಾದ ಎಂದು ನಾಯಕ ವಿನಯ್ ರಾಜಕುಮಾರ್ ಹೇಳಿದರು.

ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ. ಕುಸುಮ ನನ್ನ ಪಾತ್ರದ ಹೆಸರು. ಯಾವುದಕ್ಕೂ ಹೆದರದ ಗಂಡು ಹುಡುಗನ ಹಾಗೆ ವರ್ತಿಸುವ ಹಠಮಾರಿ ಹೆಣ್ಣಿನ ಪಾತ್ರ ನನ್ನದು ಎಂದು ನಾಯಕಿ ಮೇಘ ಶೆಟ್ಟಿ ತಿಳಿಸಿದರು.

ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ಚಿತ್ರದಲ್ಲಿ ನಟಿಸಿರುವ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದ ಚಿತ್ರತಂಡದ ಸದಸ್ಯರು "ಗ್ರಾಮಾಯಣ"ದ ಬಗ್ಗೆ ಮಾತನಾಡಿದರು.
#shivanna #vinayrajkumar

3 weeks ago | [YT] | 157